The final Memorandum
The final Memorandum
ಇನ್ನು ಪರಿಚಯವಾದಂತಿದೆ
ನಿನ್ನೆ ಭೇಟಿಯಾದಂತಿದೆ
ನಿನ್ನ ನಗು ಕಣ್ಮುಂದಿದೆ
ನಿನ್ನ ಮುಗ್ಧತೆಗೆ ಮನ ಸೋತಂತಿದೆ
ನೀ ತಿನಿಸಿದ ಕೈ ತುತ್ತು ನೆನಪಿದೆ
ನೀ ಒರಸಿದ ಕಣ್ಣೀರು ಮತ್ತೆ ಬಾರದಂತಿದೆ
ಪ್ರೀತಿ ಉಣಿಸಿ ಹೋದೆ
ಆರೈಕೆಯನ್ನು ಹಾರೈಸಿ ಹೋದೆ
ಕಥೆಯೊಂದನ್ನು ಮುಗಿಸದೇ ಹೊರಟೆ
ಕೊಟ್ಟ ಮಾತನು ನಡಿಸದೇ ಹೋದೆ
ಛಾಯಾಚಿತ್ರದ ಛಾಯೆ ಬಿಟ್ಟು ಹೊರಟೆ
ದುಃಖ್ಖದಲ್ಲು ನಗುವುದ ಕಳಿಸಿ ಹೋದೆ
ಇನ್ನು ಬೈಗುಳ ಕೇಳಬೇಕಂಬ ಆಸೆ
ಇನ್ನು ಸ್ವಲ್ಪ ಜಗಳವಾಡಬೇಕೆಂಬ ಆಸೆ
ಏಕೋ ಮನದಲ್ಲಿ ನಡುಕ
ನಿನ್ನ ಮಾತು ಕೇಳಬೇಕೆಂಬ ತವಕ
ಎಲ್ಲ ಒಂದು ಕೆಟ್ಟ ಕನಸಿನಂತಿದೆ
ಎದ್ದ ಮೇಲೆ ನೀ ಬಂದು ಮಾತನಾಡಿಸಿದಂತಿದೆ
ಏನು ಮಾಡಬೇಕೋ ತಿಳಿಯದಂತಿದೆ
ಇನ್ನು ಕೊಂಚ ಪ್ರೀತಿ ಬೇಕೆನಿಸಿದೆ
ಮೋಡದಲ್ಲಿ ನಿನ್ನ ಕಾಣಲೇ
ಆಕಾಶ ನೋಡಿ ನಿನ್ನ ನಕ್ಷತ್ರ ಎಂದು ಭಾವಿಸಲೇ
ನಿನ್ನ ಜೊತೆ ಕಳೆದ ಕ್ಷಣಗಳು ಕಣ್ಮುಂದಿದೆ
ಮನದಲ್ಲಿ ಕಾರ್ಮೋಡ ಕವಿದಿದೆ
ಮುಂದಿನ ಜನ್ಮದಲ್ಲಿ ನಿನ್ನ ಮಗನಾಗಬೇಕೆಂಬ ಆಸೆ
ಇಲ್ಲವಾದರೆ ಇನ್ನು ಬೇಗ ಪರಿಚಯವಾಗಬೇಕೆಂಬ ಆಸೆ
ಖಾಲಿ ಹಾಳೆಯಲ್ಲಿ ಕಾವ್ಯ ಬರೆಯುವುದ ಕಳಿಸಿ ಹೊರಟೆ
ಕಥೆಯೊಂದನ್ನು ಪೂರ್ಣ ಮಾಡದೇ ಹೊರಟೆ
ಮರಳಿ ಬಾ
ನಾ ಏನನ್ನು ಬಯಸುವುದಿಲ್ಲ
ನಿನ್ನ ಮುಖ ಇನ್ನೊಂದು ಬಾರಿ ನೋಡಬೇಕೆನಿಸಿದೆ
ಇನ್ನು ಒಂದೇ ಒಂದು ಮಾತು ಸಾಕೆನಿಸಿದೆ
Mohamed Jamaluddin
Link: https://mohamedjamaluddin.blogspot.in/
Facebook: https://www.facebook.com/19jamal
Instagram: https://www.instagram.com/mohamedjamaluddin28/
Flickr: https://www.flickr.com/photos/146123353@N07/
Comments
Post a Comment