The final Memorandum
The final Memorandum ಇನ್ನು ಪರಿಚಯವಾದಂತಿದೆ ನಿನ್ನೆ ಭೇಟಿಯಾದಂತಿದೆ ನಿನ್ನ ನಗು ಕಣ್ಮುಂದಿದೆ ನಿನ್ನ ಮುಗ್ಧತೆಗೆ ಮನ ಸೋತಂತಿದೆ ನೀ ತಿನಿಸಿದ ಕೈ ತುತ್ತು ನೆನಪಿದೆ ನೀ ಒರಸಿದ ಕಣ್ಣೀರು ಮತ್ತೆ ಬಾರದಂತಿದೆ ಪ್ರೀತಿ ಉಣಿಸಿ ಹೋದೆ ಆರೈಕೆಯನ್ನು ಹಾರೈಸಿ ಹೋದೆ ಕಥೆಯೊಂದನ್ನು ಮುಗಿಸದೇ ಹೊರಟೆ ಕೊಟ್ಟ ಮಾತನು ನಡಿಸದೇ ಹೋದೆ ಛಾಯಾಚಿತ್ರದ ಛಾಯೆ ಬಿಟ್ಟು ಹೊರಟೆ ದುಃಖ್ಖದಲ್ಲು ನಗುವುದ ಕಳಿಸಿ ಹೋದೆ ಇನ್ನು ಬೈಗುಳ ಕೇಳಬೇಕಂಬ ಆಸೆ ಇನ್ನು ಸ್ವಲ್ಪ ಜಗಳವಾಡಬೇಕೆಂಬ ಆಸೆ ಏಕೋ ಮನದಲ್ಲಿ ನಡುಕ ನಿನ್ನ ಮಾತು ಕೇಳಬೇಕೆಂಬ ತವಕ ಎಲ್ಲ ಒಂದು ಕೆಟ್ಟ ಕನಸಿನಂತಿದೆ ಎದ್ದ ಮೇಲೆ ನೀ ಬಂದು ಮಾತನಾಡಿಸಿದಂತಿದೆ ಏನು ಮಾಡಬೇಕೋ ತಿಳಿಯದಂತಿದೆ ಇನ್ನು ಕೊಂಚ ಪ್ರೀತಿ ಬೇಕೆನಿಸಿದೆ ಮೋಡದಲ್ಲಿ ನಿನ್ನ ಕಾಣಲೇ ಆಕಾಶ ನೋಡಿ ನಿನ್ನ ನಕ್ಷತ್ರ ಎಂದು ಭಾವಿಸಲೇ ನಿನ್ನ ಜೊತೆ ಕಳೆದ ಕ್ಷಣಗಳು ಕಣ್ಮುಂದಿದೆ ಮನದಲ್ಲಿ ಕಾರ್ಮೋಡ ಕವಿದಿದೆ ಮುಂದಿನ ಜನ್ಮದಲ್ಲಿ ನಿನ್ನ ಮಗನಾಗಬೇಕೆಂಬ ಆಸೆ ಇಲ್ಲವಾದರೆ ಇನ್ನು ಬೇಗ ಪರಿಚಯವಾಗಬೇಕೆಂಬ ಆಸೆ ಖಾಲಿ ಹಾಳೆಯಲ್ಲಿ ಕಾವ್ಯ ಬರೆಯುವುದ ಕಳಿಸಿ ಹೊರಟೆ ಕಥೆಯೊಂದನ್ನು ಪೂರ್ಣ ಮಾಡದೇ ಹೊರಟೆ ಮರಳಿ ಬಾ ನಾ ಏನನ್ನು ಬಯಸುವುದಿಲ್ಲ ನಿನ್ನ ಮುಖ ಇನ್ನೊಂದು ಬಾರಿ ನೋಡಬೇಕೆನಿಸಿದೆ ಇನ್ನು ಒಂದೇ ಒಂದು ಮಾತು ಸಾಕೆನಿಸಿದೆ Mohamed Jamaluddin Link: https://mohamedjamaluddin...